Monday, 4 February 2013

ಬಿಡಿ ಭಾವಗಳು




ಒಂದು ನೀರವ ಮುಂಜಾವು.ನೆಟ್ ಅಲ್ಲಿ ಒಂದು ಪುಟ್ಟ ಕಥೆ ಓದಿದೆ.. ಮನಸಲ್ಲೆ ಕುಂಭ ಮೆಳ..
Tum itana jo muskura rahe ho..
kya gham hai jisako chupa rahe ho..

ಪಕ್ಕದ ರೂಮಿನಿಂದ ಜಗಜೀತ್ ಸಿಂಗ್  ಹಾಡು ತೇಲಿ ಬಂತು..ಹಾಡು ನನ್ನ ಆತ್ಮವನ್ನ,ಬದುಕುಳಿಸಿದೆ
ವಾರಾಂತ್ಯ ಬಂತು.. ನಮ್ಮ ರೂಮಲ್ಲಿ ಶುದ್ಧ ಶಾಕಾಹಾರಿಯಾದ ಒಂದ್ ಹತ್ತು ಹುಡ್ಗೀರು ಸೇರಿಕೊಂಡು..ರಾತ್ರಿ ೨ಗಂಟೆವರೆಗು ಪಕ್ಕ ಮಾಂಸಾಹಾರಿ ಮಾತಾಡಿ..ಬೆಳಿಗ್ಗೆ ತಡವಾಗಿ ಎದ್ದು..ಹೊರಗಡೆ ಬೀದಿ ತಿಂಡಿ ತಿಂದು..ಫಿಲ್ಟರ್ ಕಾಫಿ ಕುಡಿದು..ಬೆಂಗಳೂರಿನ ಬಗ್ಗೆ ತಲೆಗೊಂದೊಂದು ಅಭಿಪ್ರಾಯ ಹೇಳುತ್ತ..ಶಾಪಿಂಗ್,ಸಿನಿಮಾ,ಟ್ರಿಪ್ಪು..ಪ್ಲಾನ್ ಮಾಡ್ತಿದ್ರು.
ನಾನೆಲ್ಲೊ ಆ ಜಾತ್ರೆಯಲ್ಲಿ ಅನಾಮಿಕಳಾಗಿದ್ದೆ..ಸುತ್ತಲಿನ ಚಲನಶೀಲ ಜಗತ್ತಿನ ಒಂದು ಸ್ತಬ್ಧ ಚಿತ್ರವಾಗಿದ್ದೆ..ಒಂದು ಪಾರಿಜತದ ಕಥೆಯಲ್ಲಿ ,ಕಥೆಯಾಗಿದ್ದೆ..ನಮ್ಮ ಜೀವನದ ನಿರ್ಧಾರಗಳೂ,ಅಭಿಪ್ರಾಯಗಳು,ನಿಯಮಗಳು,ಜೊತೆಗೆ ಅಂಟಿದ ಕರ್ಮ ಕಾಂಡಗಳೂ,ಎಲ್ಲವು ಪೂರ್ವ ನಿರ್ಧಾರಿತ.ಬಿಂಬ ಚೌಕಟ್ಟಿನಾಚೆ ಬಂದರೆ,ಅದೊಂದು ಛಿದ್ರ ಕನ್ನಡಿ.ಭಾಷಣ ಬಿಗಿಯೋಕೆ ನಮ್ಮದು ಜಾತ್ಯಾತೀತವಾದ ,ಸ್ತ್ರೀ-ಪುರುಷ ಸಮಾನ ಸಮಾಜ.
ಪ್ರತಿ ಹುಡುಗಿಯ ಅಂತರಾಳದಲ್ಲೊಂದು ಪುಟ್ಟ ಆಕಶವಿದೆ..ಚೌಕಟ್ಟಿನಾಚೆ ಇರುವ ಕನಸಿನ ರಾಶಿಗೆ ಕಾಲಿಡುವ ತವಕವಿದೆ.ಸ್ವಛ್ಚಂದ ಹಕ್ಕಿಯಾಗಿ,ಭೂಮಿ-ಆಕಾಶವಾಗಿ,ಭವ್ಯ ಬುದ್ಧನಾಗಿ ಜೀವಿಸುವ ಬಯಕೆ ಇದೆ.ಅದ್ರೆ ಅದೆಲ್ಲ ಒಂದು ಮಿಥ್ಯ ಕನಸಾಗಿ ಪರಿಣಮಿಸುವ,ಎಲ್ಲ ನಂಬಿಕೆಗಳನ್ನ ಸುಳ್ಳಾಗಿಸುವ ,ನಿರ್ದಿಷ್ಟ ಜೀವನದ ಚೌಕಟ್ಟಿನ ನಿಯಮಗಳ ಬಗ್ಗೆ ಭಯವಾಗುತ್ತೆ.

ಮತ್ತದೆ ಗೀತೆ
Tum itana jo muskura rahe ho..,
kya gham hai jisako chupa rahe ho...

ಮೂಕ ಭಾವಗಳಿಗೆ,ಅರ್ಧ ಬರೆದ ಕಥೆಗೆ,ಮೌನ  ಗೀತೆಗೆ  ಮುಕ್ತಿಯುಂಟೆ?


5 comments:

  1. :)
    ಬರೀತಾ ಇರಿ, ದೀರ್ಘವಾಗಿ ಬರೆಯಿರಿ, ಕಾಗುಣಿತ ದೋಷಗಳನ್ನು ಗಮನಿಸಿ.

    ReplyDelete
  2. ಚಿಂತನೆ ಚನ್ನಾಗಿದೆ.. ಅರ್ಪಿತಾ. ಭಯವನ್ನು ಮರೆ ಮಾಚುವ ಪ್ರಯತ್ನ ನಾವೆಲ್ಲಾ ಮಾಡ್ತಾನೇ ಇರ್ತೇವೆ... ಚಿಕ್ಕ ಚೊಕ್ಕ ಲೇಖನ.

    ReplyDelete
  3. ಕನಸುಗಳಿಗೆ ಚೌಕಟ್ಟು ಹಾಕಬೇಡಿ! ಚೌಕಟ್ಟಿನಾಚೆ ಹೊರಬರಲು ಬಯಸುವ ನಿಮ್ಮೊಳಗಿನ ಗೆಳತಿಗೆ ನೂರಾನೆ ಬಲ ಬರಲಿ :)
    ಪ್ರಜ್ಞಾ

    ReplyDelete
  4. ನಿಮ್ಮ ಕಥೆಯ ಚಿಂತನಾ ಶೈಲಿ ಮತ್ತು ನಿರೂಪಣೆ ತುಂಬಾ ಚೆನ್ನಾಗಿದೆ. ಇನ್ನೂ ಕಥೆ ವಿಸ್ತಾರಗೊಳಿಸಿದರೆ ಮತ್ತೆ ಓದಬೇಕೆನ್ನುವ ಭಾವನೆಗಳು ಓದುಗನ ಮನಸ್ಸನ್ನು ಸೆರೆಹಿಡಿದು ನಿಲ್ಲಿಸುವ ಹರವಣಿಗೆ ಶೈಲಿ ಅದ್ಭುತ. ಆದರೆ....


    ವೀರಣ್ಣ ಮಂಠಾಳಕರ್
    ಬಸವಕಲ್ಯಾಣ, ಬೀದರ ಜಿಲ್ಲೆ.

    ReplyDelete
  5. nimmalliya barhagaarthiyannu hariyalu bidi...shubhaashayagalu....

    ReplyDelete