Monday 4 February 2013

ಬಿಡಿ ಭಾವಗಳು




ಒಂದು ನೀರವ ಮುಂಜಾವು.ನೆಟ್ ಅಲ್ಲಿ ಒಂದು ಪುಟ್ಟ ಕಥೆ ಓದಿದೆ.. ಮನಸಲ್ಲೆ ಕುಂಭ ಮೆಳ..
Tum itana jo muskura rahe ho..
kya gham hai jisako chupa rahe ho..

ಪಕ್ಕದ ರೂಮಿನಿಂದ ಜಗಜೀತ್ ಸಿಂಗ್  ಹಾಡು ತೇಲಿ ಬಂತು..ಹಾಡು ನನ್ನ ಆತ್ಮವನ್ನ,ಬದುಕುಳಿಸಿದೆ
ವಾರಾಂತ್ಯ ಬಂತು.. ನಮ್ಮ ರೂಮಲ್ಲಿ ಶುದ್ಧ ಶಾಕಾಹಾರಿಯಾದ ಒಂದ್ ಹತ್ತು ಹುಡ್ಗೀರು ಸೇರಿಕೊಂಡು..ರಾತ್ರಿ ೨ಗಂಟೆವರೆಗು ಪಕ್ಕ ಮಾಂಸಾಹಾರಿ ಮಾತಾಡಿ..ಬೆಳಿಗ್ಗೆ ತಡವಾಗಿ ಎದ್ದು..ಹೊರಗಡೆ ಬೀದಿ ತಿಂಡಿ ತಿಂದು..ಫಿಲ್ಟರ್ ಕಾಫಿ ಕುಡಿದು..ಬೆಂಗಳೂರಿನ ಬಗ್ಗೆ ತಲೆಗೊಂದೊಂದು ಅಭಿಪ್ರಾಯ ಹೇಳುತ್ತ..ಶಾಪಿಂಗ್,ಸಿನಿಮಾ,ಟ್ರಿಪ್ಪು..ಪ್ಲಾನ್ ಮಾಡ್ತಿದ್ರು.
ನಾನೆಲ್ಲೊ ಆ ಜಾತ್ರೆಯಲ್ಲಿ ಅನಾಮಿಕಳಾಗಿದ್ದೆ..ಸುತ್ತಲಿನ ಚಲನಶೀಲ ಜಗತ್ತಿನ ಒಂದು ಸ್ತಬ್ಧ ಚಿತ್ರವಾಗಿದ್ದೆ..ಒಂದು ಪಾರಿಜತದ ಕಥೆಯಲ್ಲಿ ,ಕಥೆಯಾಗಿದ್ದೆ..ನಮ್ಮ ಜೀವನದ ನಿರ್ಧಾರಗಳೂ,ಅಭಿಪ್ರಾಯಗಳು,ನಿಯಮಗಳು,ಜೊತೆಗೆ ಅಂಟಿದ ಕರ್ಮ ಕಾಂಡಗಳೂ,ಎಲ್ಲವು ಪೂರ್ವ ನಿರ್ಧಾರಿತ.ಬಿಂಬ ಚೌಕಟ್ಟಿನಾಚೆ ಬಂದರೆ,ಅದೊಂದು ಛಿದ್ರ ಕನ್ನಡಿ.ಭಾಷಣ ಬಿಗಿಯೋಕೆ ನಮ್ಮದು ಜಾತ್ಯಾತೀತವಾದ ,ಸ್ತ್ರೀ-ಪುರುಷ ಸಮಾನ ಸಮಾಜ.
ಪ್ರತಿ ಹುಡುಗಿಯ ಅಂತರಾಳದಲ್ಲೊಂದು ಪುಟ್ಟ ಆಕಶವಿದೆ..ಚೌಕಟ್ಟಿನಾಚೆ ಇರುವ ಕನಸಿನ ರಾಶಿಗೆ ಕಾಲಿಡುವ ತವಕವಿದೆ.ಸ್ವಛ್ಚಂದ ಹಕ್ಕಿಯಾಗಿ,ಭೂಮಿ-ಆಕಾಶವಾಗಿ,ಭವ್ಯ ಬುದ್ಧನಾಗಿ ಜೀವಿಸುವ ಬಯಕೆ ಇದೆ.ಅದ್ರೆ ಅದೆಲ್ಲ ಒಂದು ಮಿಥ್ಯ ಕನಸಾಗಿ ಪರಿಣಮಿಸುವ,ಎಲ್ಲ ನಂಬಿಕೆಗಳನ್ನ ಸುಳ್ಳಾಗಿಸುವ ,ನಿರ್ದಿಷ್ಟ ಜೀವನದ ಚೌಕಟ್ಟಿನ ನಿಯಮಗಳ ಬಗ್ಗೆ ಭಯವಾಗುತ್ತೆ.

ಮತ್ತದೆ ಗೀತೆ
Tum itana jo muskura rahe ho..,
kya gham hai jisako chupa rahe ho...

ಮೂಕ ಭಾವಗಳಿಗೆ,ಅರ್ಧ ಬರೆದ ಕಥೆಗೆ,ಮೌನ  ಗೀತೆಗೆ  ಮುಕ್ತಿಯುಂಟೆ?


Tuesday 6 November 2012

ಕಣ್ ಬಟ್ಟಲಲ್ಲಿ ಕನಸುಗಳ ದೀಪಾವಳಿ



                               

           ದಸರೆಯ ಸಂಭ್ರಮ ಮುಗಿಸಿ,ಕನ್ನಡದ ಬಗ್ಗೆ ಒಂದಿಷ್ಟು ಚರ್ಚೆ  ಮಾಡಿ,ಸುಧಾರಿಸಿಕೊಳ್ಳುವಷ್ಟರಲ್ಲಿ ಬಂತು ನೋಡಿ ದೀಪಾವಳಿ. ಹಬ್ಬ ಅಂದ್ರೆ ನಮಗೆಲ್ಲ ಬಾಲ್ಯ ನೆನಪಾಗುತ್ತೆ.ಮನೆಯ ಅಂಗಳದಲ್ಲಿ ಚಿಕ್ಕ ಚಿಕ್ಕ ಆಸೆಗಳ ಪಟಾಕಿ  ಹಾರಿಸೊದು,ಅವತ್ತಿಗವೇ,ದೊಡ್ಡ ದೊಡ್ಡ ಸಂಭ್ರಮಗಳು ಅಲ್ವ?
              ಹೀಗೆ ಒಂದು ದೀಪಾವಳಿ ಅಮಾವಾಸ್ಯೆ ,ಜನುಮದ ಜೊಡಿ ಲಂಗ ಹಾಕೊಂಡು,ಮೂರ್ ಸೆಂಟೀಮೀಟರ್ರು ಜುಟ್ಟೂ ಹಾರಿಸ್ಕೊಂಡು ತಿರುಗ್ತ ಇದೀನಿ.ಸುತ್ತ ಮುತ್ತಲಿನ ಹುಡುಗ್ರಲ್ಲಿ ನಾನೇ ದೊಡ್ಡೋಳು, ಎಲ್ಲರನ್ನು ಕರದು ಪಟಾಕಿ  ಯಾರ್ ಯಾರ್ ಹತ್ರ ಎಷ್ಟ್ ಎಷ್ಟ್ ಡಬ್ಬಿ ಇದೆಯೊ ಅಂತ ಕೇಳ್ತಿದ್ದೆ.ಒಟ್ಟು  ಮೂರು-ನಾಲ್ಕು ಅಂತ ಲೆಕ್ಕ ಹಾಕ್ತಿರೋವಾಗ ,ಅಮ್ಮ ಕೂಗಿದ್ಲು"ಆಡೂವಾಗ ತಂಗೀಗೂ ಜೊತಿಗಿ ಕರೀ ಅಂತ ಎಷ್ಟ ಸರಿ ನಿಂಗ್ ಹೇಳ್ಲಿ,ಅಳ್ಲಿಕತ್ತಾಳ ನೋಡು" ಅಂದ್ಲು.ಅಯ್ಯೊ ದೆವ್ರೆ ಅಕ್ಕ ಮಾಡಿ ನಂಗೆಷ್ಟು ಕಷ್ಟ ಕೊಡ್ತಿಯ(ನನ್ಗೆ ಇಬ್ರು ತಂಗಿ ಮತ್ತೆ ತಮ್ಮ,ಕೂಡು ಕುಟುಂಬ ನಮ್ಮದು),ಎಲ್ಲಾರನ್ನು  ನಾನೇ ನೋಡ್ಕೊಬೇಕು ಛೇ! ಅನ್ಕೊಂಡೆ.
             ಸಂಜೆಯ ಸೂರ್ಯ ದಿನಗೂಲಿ ಮುಗಿಸಿ ದಿಗಂತದಾಚೆಗೆ ಹೊರತಿದ್ದ.ಅಂಗಳದಲ್ಲೆಲ್ಲ ಮಬ್ಬುಗತ್ತಲು,ಎಲ್ಲರು ಮನೆ ಮುಂದೆ ಸಾಲು ಪ್ರಣತಿಗಳ ಸಿಂಗಾರ ಮಾಡುತಿದ್ರು.ನಾವು ಆ ದೀಪದ ಬಟ್ಟಲಲ್ಲಿ ಸಣ್ಣಬತ್ತಿ,ಸ್ವಲ್ಪ ಎಣ್ಣೇ ಹಾಕಿ ಇತ್ತಿದ್ದೆವು,ಅಮ್ಮ ಬಂದು ದೀಪ ಬೆಳಗೋಳೂ.
             ವರ್ಕ್ ಸೀರೆ,ಕಿವಿಗೆ ಮುತ್ತಿನ ಓಲೆ ಹಾಕೊಂಡ ಅಮ್ಮ,ಕ್ರೀಮ್ ಶರ್ಟು,ಕರೀ ಪ್ಯಾಂಟು ಹಾಕೊಂಡು ಅಪ್ಪ ಚೇರ್ ಮೇಲೆ ಕೂತಿದ್ರು.ಎಂದಿನಂತೇ ಅಮ್ಮ ಅಪ್ಪನ್ನ ರೆಗಸ್ತಿದ್ಲು,ಅವ್ರು ಸರಳವಗಿ ಮುಗುಳ್ನಗುತ್ತಿದ್ದರು.  ಚಿಕ್ಕಪ್ಪ,ಚಿಕ್ಕಮ್ಮ ಎಲ್ಲ ದೇವಸ್ಥಾನಕ್ಕೆ ಹೊಗೋಕೆ ತಯಾರಾಗುತ್ತಿದ್ದರು.ಆವಾಗ್ಲೆ ಹಿತ್ತಲಿನಿಂದ ಗಾಳಿಯನ್ನ ಸೀಳಿಕೊಂದು ಬಂದ ಕಿರುಚಲು ಧ್ವನಿ ಕೇಳಿಸಿತು.  
ನಾನು ಮನೆ ಮುಂದೆ ಇದ್ದೆ ಹುಡುಗ್ರನ್ನೆಲ್ಲ ಕರೆಸಿ ಒಂದೇ ಕಡೆ ಗುಡ್ಡೆ ಹಾಕ್ಸೀ ನಂಗೇ  ತಂದು ಕೊಡೋರು,ಅಕ್ಕ ಹಾರಸ್ತಾಳೆ ಆವಗ ಎಲ್ಲ ದೂರ ಸರೀಬೇಕು ಅಂತ ಹೆಳ್ತಿದ್ದೆ.ಪಕ್ಕದಲ್ಲೆಲ್ಲು ನನ್ ತಂಗಿ ಕಾಣಸ್ಲಿಲ್ಲ.
               ಮನೆಯವರೆಲ್ಲ ಹಿಂದಿನ ಬಾಗ್ಲು ದಾಟೊಷ್ಟರಲ್ಲಿ ಆಘಾತ.ನನ್ನ ಪುಟ್ಟ ತಂಗಿಯ ಕಾಲುಗಳ ಮೇಲೆ ಮೂರುವರೆ ಫೀಟಿನ ದಪ್ಪ ಕಲ್ಲು ಬಿದ್ದಿತ್ತು.ಹಾಗೆ ಅವಳ್ನ ಎತ್ಕೊಂಡು ಅಪ್ಪ ಆಸ್ಪತ್ರೆಗೆ ಓಡಿದ್ರು.ಅಲ್ಲಿ ನಮ್ಮನ್ನೆಲ್ಲ ಬೈದು ಹೊರಗಡೆ ಕಳಿಸಿದ್ರು.ಅಮ್ಮ ಅಪ್ಪ ಒಳಗೆ ಇದ್ರು.ಸ್ವಲ್ಪ ಹೊತ್ತು ಆದ್ಮೆಲೆ ಅಮ್ಮ ಅಳ್ಕೊಂಡು ಹೊರಗಡೆ ಬಂದ್ರು.ಡಾಕ್ಟರು ಅವಳಿಗೆ ಬೈದು ಕಳಿಸಿದ್ರಂತೆ.ಕನ್ನಡಕ ಸರಿ ಮಡ್ಕೊಳ್ತ ಹೊಗಡೆ ಬಂದ ಡಾಕ್ಟ್ರು ನಮ್ಮ ಮುಖಗಳನ್ನ ನೋಡಿ ,"ಏನು ಪ್ರಾಬ್ಲಮ್ ಇಲ್ಲ,ಅನಸ್ತಿಷಿಯ ಕೊಡದ ಹೊಲಿಗೆ ಹಾಕಿದೆ ಅದಕ್ಕೆ ಅವರನ್ನ ಹೊರಗಡೆ ಕಳಿಸಿದೆ".ಅಂದ್ರು,ಕೇಳಿ ನಿಟ್ಟುಸಿರು ಬಿಟ್ಟೆವು.ಹೋಗಿ ನನ್ನ ತಂಗೀನ ನೊಡಿದ್ರೆ ನಗ್ತಿದಾಳೆ.
                   ಹ್ಯಾಗೆ ಬಿದ್ದೆ ,ಯಾಕ್ ಕಿಸಿತಿದ್ದಿಯ ಅಂತ ಕೇಳಿದ್ರೆ"ಮನೆ ಹಿಂದೆ ಎನೋ ಹೆಣ್ಮಕ್ಳೂ ಜಗಳ ಆಡ್ತಿದ್ರು ಅಂತ ಬಟ್ಟೆ ಒಗೆಯುವ ಕಟ್ಟೆ ಮೇಲೆ ನಿಂತುಕೊಂಡು ಮಜ ತೊಗೋತಿದ್ದೆ,ಆಯ ತಪ್ಪಿ,ಕಲ್ಲು ಕಾಲ ಮೇಲೆ ಬಿತ್ತು,ಆಗ ಅಳು ಬಂತು.ಈಗ ಒಂದು ವಾರ ಶಾಲೆ ಇಲ್ಲ,ಬೇಕಾಗಿರೊ ತಿಂಡಿ ಎಲ್ಲ ಕೂತಲ್ಲೆ ತಿನ್ಕೊಂಡು ಆರಾಮಾಗಿ ಇರಬಹುದು ಅಂತ ಖುಷಿ ಆಗ್ತಿದೆ"ಅಂದಾಗ ನಮ್ಮೆಲರ ತುಟಿಯಲ್ಲಿ ಹಬ್ಬದ ನಗು ಮತ್ತೆ ಮೂಡಿತು.



Monday 5 November 2012

ಆರಂಭ


ಬರೀಬೇಕು ,ಇನ್ನು ಬರೀದೆ ಇರೋಕೆ  ಸಾಧ್ಯನೇ   ಇಲ್ಲ ಅಂದಾಗ ಶುರು ಮಾಡಿದಿನಿ. ಭಯಂಕರವಾಗಿ ಓದಿದವಳಲ್ಲ,ಎಲ್ಲ ಬರಹಗಾರರಿಗೆ ಇರೋ ಹಾಗೆ,ಐದನೇ-ಆರನೇ ತರಗತಿಯಿಂದಲೇ ಓದಿದ ರೆಕಾರ್ಡ್ಸ್ ಇಲ್ಲ.ಇತ್ತಿಚೆಗೆ ನಾಲ್ಕು-ಐದು ವರ್ಷದಿಂದ ಓದೋ ಹುಚ್ಚು  .
         
                      ಊರೂರು ತಿರುಗುತ್ತ ,ಬದುಕಿನ ಅನಿರೀಕ್ಷಿತ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ,ಇಲ್ಲಿಗೆ ಬಂದು ತಲುಪಿದ್ದೇನೆ.ಒಂದಷ್ಟು ಬೆಳೆಯುವ ,ಮತ್ತಷ್ಟು ಕಲಿಯುವ , ಸೂಕ್ಷ್ಮತೆಗಳನ್ನ ಅರಿಯುವ ,ಬದುಕಿನ ಜೊತೆಗೆ ಒಂದು ಆಳವಾದ ಸಂಬಂಧ ಬೆಳೆಸಲು ಬಂದಿದ್ದೇನೆ.
             
                           ಐಟಿ ,ಬಿಟಿ ಒಂದು ಕಡೆ , ಟ್ರಾಫಿಕ್ಕು ,ಪೊಲ್ಲುಷನ್ನು,ಕಸ ಹಾಳು ಮೂಳು ಅಂತ ಬೆಂಗಳೂರಿನ ಬಗ್ಗೆ ದೊಡ್ಡ ಕಂಪ್ಲೇಂಟ್ ಇದೆ.ನಿರಂತರ ರೇಜಿಗೆ ಹುಟ್ಟಿಸೋ  ಈ ಸಂಗತಿಗಳ ಮಧ್ಯೆ,ಇಲ್ಲಿನ ವಾತಾವರಣ, ಮಾತ್ರ ತನ್ನ ಸೌಂದರ್ಯದಿಂದ ನಮ್ಮನ್ನ ಬೆರಗುಗೊಲಿಸುತ್ತಲೇ ಇದೆ.ಪ್ರತಿಯೊಂದರಲ್ಲು ಒಂದಿನಿತು ಒಳ್ಳೇದು ಇದ್ದೆ ಇದೆ.ನಮ್ಮಬೀಚಿ ಹೇಳಿದಾರೆ,ದ್ರಿಷ್ಟಿಯಂತೆ
ಸ್ರಿಷ್ಟಿ.

       ಈ ಜೀವನ ಪ್ರಿತ್ಸೋಕೆ ಕಾರಣ ಬೇಕಾಗಿಲ್ಲ ಅಲ್ವಾ.ಅಮ್ಮನ ಆ ತಬ್ಬುಗೆಯಲ್ಲಿನ ನಿರುಮ್ಮಳತೆ ,ಅಪ್ಪನ ಮಾತಿನಲ್ಲಿರೋ ಭರವಸೆ ,ಗೆಳತಿಯ ಜೊತೆಗಿನ ಸಲಿಗೆ   ,ಈ ಸಣ್ಣ ಸಣ್ಣ ಸಂತೋಷಗಳೇ ದೊಡ್ಡದಾದ ಬದುಕನ್ನ ಪೂರ್ಣಗೊಳಿಸೋದು .ನಿಶ್ಚಿಂತೆಯಿಂದ ಬರೆಯೋಕು,ಕಂಡ  ಕನಸು ನಿಜವಗಿಸೋಕು, ಇರೋದು  ಒಂದೇ ಜೀವನ,ಏನಂತೀರಿ ?