Monday, 5 November 2012

ಆರಂಭ


ಬರೀಬೇಕು ,ಇನ್ನು ಬರೀದೆ ಇರೋಕೆ  ಸಾಧ್ಯನೇ   ಇಲ್ಲ ಅಂದಾಗ ಶುರು ಮಾಡಿದಿನಿ. ಭಯಂಕರವಾಗಿ ಓದಿದವಳಲ್ಲ,ಎಲ್ಲ ಬರಹಗಾರರಿಗೆ ಇರೋ ಹಾಗೆ,ಐದನೇ-ಆರನೇ ತರಗತಿಯಿಂದಲೇ ಓದಿದ ರೆಕಾರ್ಡ್ಸ್ ಇಲ್ಲ.ಇತ್ತಿಚೆಗೆ ನಾಲ್ಕು-ಐದು ವರ್ಷದಿಂದ ಓದೋ ಹುಚ್ಚು  .
         
                      ಊರೂರು ತಿರುಗುತ್ತ ,ಬದುಕಿನ ಅನಿರೀಕ್ಷಿತ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ,ಇಲ್ಲಿಗೆ ಬಂದು ತಲುಪಿದ್ದೇನೆ.ಒಂದಷ್ಟು ಬೆಳೆಯುವ ,ಮತ್ತಷ್ಟು ಕಲಿಯುವ , ಸೂಕ್ಷ್ಮತೆಗಳನ್ನ ಅರಿಯುವ ,ಬದುಕಿನ ಜೊತೆಗೆ ಒಂದು ಆಳವಾದ ಸಂಬಂಧ ಬೆಳೆಸಲು ಬಂದಿದ್ದೇನೆ.
             
                           ಐಟಿ ,ಬಿಟಿ ಒಂದು ಕಡೆ , ಟ್ರಾಫಿಕ್ಕು ,ಪೊಲ್ಲುಷನ್ನು,ಕಸ ಹಾಳು ಮೂಳು ಅಂತ ಬೆಂಗಳೂರಿನ ಬಗ್ಗೆ ದೊಡ್ಡ ಕಂಪ್ಲೇಂಟ್ ಇದೆ.ನಿರಂತರ ರೇಜಿಗೆ ಹುಟ್ಟಿಸೋ  ಈ ಸಂಗತಿಗಳ ಮಧ್ಯೆ,ಇಲ್ಲಿನ ವಾತಾವರಣ, ಮಾತ್ರ ತನ್ನ ಸೌಂದರ್ಯದಿಂದ ನಮ್ಮನ್ನ ಬೆರಗುಗೊಲಿಸುತ್ತಲೇ ಇದೆ.ಪ್ರತಿಯೊಂದರಲ್ಲು ಒಂದಿನಿತು ಒಳ್ಳೇದು ಇದ್ದೆ ಇದೆ.ನಮ್ಮಬೀಚಿ ಹೇಳಿದಾರೆ,ದ್ರಿಷ್ಟಿಯಂತೆ
ಸ್ರಿಷ್ಟಿ.

       ಈ ಜೀವನ ಪ್ರಿತ್ಸೋಕೆ ಕಾರಣ ಬೇಕಾಗಿಲ್ಲ ಅಲ್ವಾ.ಅಮ್ಮನ ಆ ತಬ್ಬುಗೆಯಲ್ಲಿನ ನಿರುಮ್ಮಳತೆ ,ಅಪ್ಪನ ಮಾತಿನಲ್ಲಿರೋ ಭರವಸೆ ,ಗೆಳತಿಯ ಜೊತೆಗಿನ ಸಲಿಗೆ   ,ಈ ಸಣ್ಣ ಸಣ್ಣ ಸಂತೋಷಗಳೇ ದೊಡ್ಡದಾದ ಬದುಕನ್ನ ಪೂರ್ಣಗೊಳಿಸೋದು .ನಿಶ್ಚಿಂತೆಯಿಂದ ಬರೆಯೋಕು,ಕಂಡ  ಕನಸು ನಿಜವಗಿಸೋಕು, ಇರೋದು  ಒಂದೇ ಜೀವನ,ಏನಂತೀರಿ ?

7 comments:

  1. ಅಕ್ಷರ ಯಾತ್ರೆ ಶುರು ಮಾಡಿದ್ದೀರ.. ನಿಮ್ಮ ಪಯಣ ಸುಖಕರವಾಗಿರಲಿ.. ಶುಭವಾಗಲಿ..

    ReplyDelete
  2. ಮುನ್ನುಡಿಯೇ ಕುತೂಹಲಕ್ಕೆ ಕೆಡವಿತು.

    ಒಳ್ಳೆಯದಾಗಲಿ, ಫಾಲೋವರ್ಸ್ ಅಂಕಣ ತೆರೆಯಿರಿ.

    ಒಳ್ಳೆಯದಾಗಲಿ.

    ReplyDelete